Pages

Tuesday 12 July 2011

ನ್ಯೂಟನನ್ನ ತಾಳ್ಮೆ

ಸರ್ ಐಸಾಕ್ ನ್ಯೂಟನ್ ಗುರುತ್ವಾಕರ್ಷಣ ತತ್ವವನ್ನು ಕಂಡು ಹಿಡಿದ ಪ್ರಖ್ಯಾತ ವಿಜ್ಞಾನಿ . ಒಮ್ಮೆ ಅವನು ತೋಟದಲ್ಲಿ ತಿರುಗಡುತ್ತಿರುವಾಗ ಸೇಬು ಮರದಿಂದ ಹಣ್ಣು ಬೀಳುವುದನ್ನು ನೋಡಿ ಇದಕ್ಕಾಗಲೀ, ಬಲಕ್ಕಗಲೀ ಮೇಲಕ್ಕಗಲಿ ಏಕೆ ಹೋಗಲಿಲ್ಲ? ಎಲ್ಲ ವಸ್ತುಗಳು ನೆಲದ ಮೇಲೆಯೇ ಏಕೆ ಬಿಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ಮಾಡಿ ಭೂಮಿಯ ಗುರುತ್ವಾಕರ್ಷಣ ನಿಯಮಗಳನ್ನು ರೂಪಿಸಿದ. ನ್ಯೂಟನನ್ನ ಜೀವನದ ಒಂದು ಘಟನೆ ಅವನ ಮೇಲೆ ಅಪಾರ ಪರಿಣಾಮ ಬೀರಿತ್ತು. ಇದರಿಂದ ಅವನ ಆರೋಗ್ಯದ ಮೇಲೆಯೂ ಅಪಾರ ಪರಿಣಾಮ ಬೀರಿತ್ತು.ಇದರಿಂದ ಅವನ ವಾದ ಮಾಡುವ ಶಕ್ತಿಯನ್ನು ಹೆಚ್ಚು ಕಡಿಮೆ ಕಳೆದುಕೊಂಡನು.
ನ್ಯೂಟನ್ ಅನೇಕ ವರ್ಷಗಳ ಪರಿಶ್ರಮದಿಂದ ಒಂದು ಮುಖ್ಯವಾದ ಸಂಶೋಧನೆಯನ್ನು ಕೈಗೊಂಡಿದ್ದ. ಕೊನೆಗೂ ಅದರಲ್ಲಿ ಸಫಲನು ಆದ.ತನ್ನ ಸಂಶೋಧನೆಗಳನ್ನು ಪ್ರಕಟಿಸಲು ಸಿದ್ಧತೆಗಳನ್ನು ನಡೆಸಿದ್ದ. ಇದು ನಡೆದದ್ದು ನ್ಯೂಟನನ್ನ 51ನೇ ವಯಸ್ಸಿನಲ್ಲಿ. ತನ್ನ ಅಮೂಲ್ಯ ಸಂಶೋಧನೆಗೆ ಸಂಬಂದಪಟ್ಟ ಲೇಖನಗಳನ್ನು ತನ್ನ ಮೇಜಿನ ಮೇಲೆ ಇಟ್ಟು ಪ್ರಾರ್ಥನೆಗೆ ತೆರಳಿದ್ದ. ಅವನ ಗೈರು ಹಾಜರಿಯಲ್ಲಿ ಒಂದು ಇಲಿ ಮೇಜಿನ ಮೇಲೆ ಬಂದು ಅವನ ಸಂಶೋಧನಾ ಲೇಖನಗಳನ್ನು ಹಾಳು ಮಾಡತೊಡಗಿತು. ಅವನ ನಂಬಿಕೆಯ ನಾಯಿ ಡೈಮಂಡ್ ತನ್ನ ಯಜಮಾನನ ಲೇಖನಗಳನ್ನು ರಕ್ಷಿಸಲು ಇಲಿಯ ಮೇಲೆ ನೆಗೆಯಿತು. ಈ ಗೊಂದಲದಲ್ಲಿ ಉರಿಯುತ್ತಿದ್ದ ಒಂದು ಮೇಣದ ಬತ್ತಿ ಲೇಖನಗಳ ಮೇಲೆ ಉರಿಳಿ ಬಿದ್ದು ಅದನ್ನು ಸಂಪೂರ್ಣ ನಾಶಮಾಡಿತು.ನ್ಯೂಟನ್ ಹಿಂದಿರುಗಿ ಬಂದು ನೋಡಿದಾಗ ಹಲವು ವರ್ಷಗಳ ತನ್ನ ಶ್ರಮ ಸುಟ್ಟು ಬುದಿಯಗಿರುವುದನ್ನು ಕಂಡು. ಅವನಿಗೆ ಬೇಸರವಾದರೂ ನ್ಯೂಟನ್ ತಾಳ್ಮೆ
ಕಳೆದುಕೊಳ್ಳದೆ ತನ್ನ ನಾಯಿಗೆ ಬೈಯ್ಯಲಿಲ್ಲ, ಹೊಡೆಯಲಿಲ್ಲ. ಇದು ಅವನ ಮೇಲೆ ಆಘಾತವುಂಟು ಮಾಡಿದರು ಸಿಟ್ಟನ್ನು ತೋರದೆ ಸಂಯಮ ಕಾಪಾಡಿಕೊಂಡಿದ್ದು ಅವನ ಹೆಗ್ಗಳಿಕೆ.

1 comment: