Pages

Sunday 21 August 2011

ರಾತ್ರಿ ಕೆಲಸ.

    ನಾನು ಒಂದು ಕಾಲದಲ್ಲಿ ರಾತ್ರಿ ಕೆಲಸ ಅಂದರೆ ನೈಟ್ ಶಿಫ್ಟ್ ಕೆಲಸ ಅಂದ್ರೆ ಚನ್ನಾಗಿ ಇರುತ್ತೆ ಅಂದುಕೊಡಿದ್ದೆ.
ಯಾವುದೇ ವಸ್ತು ಅಥವಾ ಕೆಲಸ ಅದು ನಮ್ಮಿದ್ದ ದೂರ ಇದ್ದಾಗ ಅದರಬಗ್ಗೆ ತುಂಬ ಪ್ರತಿ ಇರುತ್ತದೆ. ಇದೇರೀತಿ ನನ್ನ ವಿಷಯದಲ್ಲೂ ಆಯಿತು, ಮೊದಲು ನಾನು ರಾತ್ರಿ ಕೆಲಸ ಮಾಡುತಿರಲಿಲ್ಲ ಆಗ ನನ್ನ ಗೆಳೆಯನೊಬ್ಬ ಮಾಡುತಿದ್ದ. ಆತ ಹೇಳುತಿದ್ದ ಈ ರಾತ್ರಿ ಕೆಲಸ ತುಂಬಾ ಕಷ್ಟಕಾಣು ಎಂದು ಆಗಾಗ ಹೇಳುತಿದ್ದ ಆಗ ನಾನು ಹೇಳುತಿದ್ದೆ ನನಗೆನಾದ್ರು ರಾತ್ರಿ ಕೆಲಸ ಮಾಡು ಚಾನ್ಸ್ ಬಂದ್ರೆ ಸಂತೋಷದಿಂದ ಮಾಡುತೇನೆ ಎಂದು ಹೇಳ್ತಿದ್ದೆ, ಇದೆರಿತಿಕಾಲ ಕಳಿತಿರುವಾಗ ಅಂತ ಚಾನ್ಸ್ ನನಗೆ ಬಂತು. ಆಗ ನಾನು ತೊಂಬ ಸಂತೋಷಪಟ್ಟೆ. ನಾನು ಏನಾದ್ರು ಮಾಡುವಾಗ  ಅವನ ಸಲಹೆ ಕೆಳುತಿದ್ದೆ ಅದೇ ರೀತಿ ಇಸರಿನು ಕೇಳ್ದೆ. ಆ ಸಮಯದಲ್ಲಿ ನನ್ನ ಗೆಳೆಯ ಹೇಳಿದ ಬೇಡಕಾಣು ಮೊದಲು ಖುಷಿಯಾಗುತ್ತದೆ ಆಮೇಲೆ ನಿನಗೇ ತಿಳಿಯುತ್ತದೆ. ಆಗ ನೀನೆ ಬಂದು ನನ್ನ ಹತ್ರಬಂದು ಹೇಳ್ತಿಯ ಈ ರಾತ್ರಿ ಕೆಲಸಕ್ಕೆ ಯಾಕಾದ್ರು ಒಪಕೊಂಡೆ ಅನಿಸುತ್ತದೆ. ನೀನು ಒಂದು ಸಾರೀ ಸೇರಿಕೊಂಡರೆ ಮತ್ತೆ ಹೊರಗೆ ಬರಲು ತುಂಬಾ ಕಷ್ಟ ಪಡಬೇಕು. ಉದಾಹರಣೆಗೆ :- ಎಣ್ಣೆ ಕೊಡಿಯಲು ಸ್ಟಾಟ್ ಮಾಡಿದರೆ ಅದರಿಂದ ಹೊರಗೆ ಬರಲು ಅಂದ್ರೆ ಕೊಡಿಯೋದನ್ನು ಬಿಡೋದು ಕಷ್ಟನು ಅದೇರೀತಿ ಕಾಣು ಅಂದ್ರೆ ನೀನು ರಾತ್ರಿ ಕೆಲಸ ಮಾಡಕ್ಕೆ ಆಗಲ್ಲ ಅಂದ್ರು ಅಲ್ಲಿ ಇರುವ ಟಿಮ್ ಬಿಡಲ್ಲ ಇದು ನನ್ನ ಅನುಬವಾದ ಮಾತು ಕಾಣು ಇಗಲೇ ಹೇಳಿಬಿಡು ಯಾಕೆಂದರೆ ಒಂದು ಸಾರೀ ಒಳಡದೆ ಹೋದ್ರೆ ಹೊರಗೆ ಬರಲು ಆಗಲ್ಲ ದಕ್ಕೆ .
        ನೂಡು ಗೆಳೆಯ ಯೋಚನೆಮಾಡು ಇದರಮೇಲೆ ನಿನಗೆಬಿಟ್ಟಿದು. ಆಗ ನನ್ನು ಹೇಳದೆ ನಾನು ಆತರ ಅಲ್ಲ ರಾತ್ರಿಕೆಲಸ
ಮಾಡತೀನಿ ಅಂದೇ ಆಗ ಅವನ್ನು ನಾನು ನೋಡುತ್ತಾ ಇರುತ್ತೆನಿ ಎಲ್ಲಿವರಗೆ ಮಾಡ್ತಿಯ ಅಂತ ಹೇಳ್ದ, ಹಾಗೆ ನಾನು ಹೇಳಿದ
ಮಾತು ನಿನಗೇ ಗೊತ್ತಾದಾಗ ನೀನೆ ಕಾಲ್ ಮಾಡಿ ಹೇಳ್ತಿಯ ಅಂತ ಹೇಳಿ ನನ್ನಗೆ ಕೆಲಸಕ್ಕೆ ಟೈಮ್ ಆಯ್ತು ಬರತೀನಿ
ಯೋಚನೆಮಾಡಿ ನಿರ್ಧಾರಕ್ಕೆ ಬಾ ಅಂದು ಹೇಳಿ ಹೋರಾಟ.
       ಹೀಗೆ ರಾತ್ರಿ ಕೆಲಸ ಹೋಗಲು ಅರಂಬಿಸಿದೆ ಕೆಲದಿವಸಗಳ ನಂತರ ಬೇಜಾರು ಅಗತೋಡಗಿತು ಏಕೆಂದರೆ ನಾನು ಮನೆಗೆ ಹೋದಾಗ ನನ್ನ ಗೆಳೆಯರಲ್ಲ ಕೆಲಸಕ್ಕೆ ಹೋಗುತಿದರು ನಾನು ಮಾತ್ರ ಮನೆಯಲ್ಲಿ ಇರುತಿದ್ದೆ ಆ ಸಮಯದೆಲ್ಲಿ ನಿದ್ದೆ ಮಾಡುತಿದ್ದೆ ಮತ್ತು ಟಿವಿ ನುಡುತಿದ್ದೆ. ಅದೇ  ಸಮಯದಲ್ಲಿ ಪರೀಕ್ಷೆ ಹತ್ರಾ ಬಂದಿದರಿಂದ ಓದಿಕೊಳುತಿದ್ದೆ ನಂತರ ಪರೀಕ್ಷೆ ಮುಗಿಯಿತ್ತು. ನಂತರವೂ ರಾತ್ರಿ ಕೆಲಸ ಹೋಗುತಿದ್ದೆ ಬರುಬರುತ್ತಾ ಕೆಲಸದ ಸಮಯದಲು ಮತ್ತು ಮನೆಯಲ್ಲೂ ಒಬ್ಬನೇ ಇರುವುದರಿಂದ ಏಕಾಂಗಿ ತನವು ಕಡಲು ಆರಂಬಿಸಿತು ಆಸಮಯದಲ್ಲಿ ಹಳೆಯ ನಿನಪುಗಳು ಮತ್ತು ಈ ರಾತ್ರಿಕೆಲಸದಬಗ್ಗೆ ಒಂದು ತಾರದ ಬೇಜಾರು ಯಾಕೆಂದರೆ ಕೆಲಸ ಮಾಡುವ ಸಮಯದಲ್ಲೂ ಒಬ್ಬನೇ ಇರಬೇಕು ಯಲ್ಲಕಡೆಯಲ್ಲಿ ಖಾಲಿ ಖಾಲಿ ಮಾತನಾಡಲು ಯಾರುಇಲ್ಲ ಒಂಟಿತನ ಮತ್ತು ಮನೆಗೆ ಬಂದರು ಅದೇರೀತಿ ಯಾಕೆಂದರೆ ನಮ್ಮ ಮನೆಯಲ್ಲಿ ಇರುವ ಸ್ನೇಹಿತರು ಕೆಲಸಕ್ಕೆ ಹೋಗುತ್ತಾರೆ. ಅಲ್ಲಿಯು ಯಾರು ಇರುವುದಿಲ್ಲ ಒಬ್ಬನೇ ಮನೆಗೆ ಹೋಗಿ ಮಲಗಿ ಆರಾಮವಾಗಿ ನಿದ್ದೆ ಮಾಡುಣ ಅಂದರೆ ಫೋನ್ ಮತ್ತು ಪಕ್ಕದ ಮನೆಯ ಟಿವಿ ಶಬ್ದದ ಮತ್ತು ಅಲ್ಲಿಯೇ ಇರುವ ಹಾರ್ಡ್ ವೇರ್ ಅಂಗಡಿಯ ಸದ್ದು ಹಾಗೆ ಮಲಗಿದಾಗ ಒಂದು ಸಾರಿ ಎಚ್ಚರವಾದರೆ ಮತ್ತೆ ನಿದ್ದೆ ಬರುವುದಿಲ್ಲ. ಆಸಮಯದಲ್ಲಿ ನನ್ನ ಹಳೆಯ ನೆನಪುಗಳು ಕಾಡುತ್ತವೆ. ಅವುಗಳೆಂದರೆ ಮನೆಯಲ್ಲಿ ಮೊದಲು ಕೆಲಸ ಮೊಗಿಸಿಬಂದ ನಂತರ ನನ್ನ ಗೆಳೆಯರು ಆ ದಿನದ ಸಿಹಿ ಕಹಿಗಳನ್ನು ಹಚಿಕೊಳುತಿದ್ದೆವು. ಹೀಗೆ ಮಾತನಾಡುತ್ತ ಮಲಗುವುದು ಸುಮಾರು 11.30 ಆಗುತಿತ್ತು. ಆದರೆ ಇಗ ಮನೆಯಲ್ಲಿ ಯಾರು ಇರುಉದಿಲ್ಲ ಯಾರಮಾತು ಕೇಳಲು ಆಗುವುದಿಲ್ಲ ಇದರಜೋತೆಗೆ ನಾನು ನನ್ನ ಗೆಳಯರನ್ನು ಬೆಟ್ಟಿಮಾಡುವುದು ವಾರಕ್ಕೆ ಒಂದು ಸಾರೀ (ಮನೆ ಅಂದ್ರೆ ನಾನು ಮತ್ತು ನನ್ನ ೩ ಜನ ಗೆಳೆಯರು ಇರುವ ರೂಮಿಗೆ ನಾನು ಮನೆ ಅಂತ ಹೇಳುತಿದ್ದೆನ್ನೇ) ಇವರನ್ನು ಬೇಟಿಮಾಡುವುದಾಗಿದೆ. ನನ್ನ ಗೆಳೆಯರು ಹೇಳ್ತಾರೆ ನಮ್ಮ ನಿಮ್ಮ ಬೆಟ್ಟಿ ನಿನ್ನು ಮೊಂದಿನವರವೇ ಅಂತ ಕೇಳ್ತಾರೆ ಅಗನನು ನೋಡಬೇಕು ಏನಾದರು ಕೆಲಸ ಇದ್ರೆ ಡೇ ಶಿಫ್ಟ್ ಬರಕ್ಕೆ ಹೇಳ್ತಾರೆ ಆಗ ಸಿಕ್ತೀನಿ ಅಂತ ಆಗ ಅವರು ಹೇಳ್ತಾರೆ ಕೆಲಸ ಇದ್ದಾಗ ಮಾತ್ರ
ಡೇ ಶಿಫ್ಟ್ ಇಲ್ಲವಂದ್ರೆ ನೈಟ್ ಶಿಫ್ಟ್ ಅಂತಾರೆ.
      ನಮ್ಮ ಕೆಲಸದಲ್ಲಿ ಒಬ್ಬ ನನ್ನಗೆ ತುಂಬಾ ಇಷ್ಟದ ಗೆಳೆಯನಿದನ್ನೇ ಅವರು ಸದಾ ನನ್ನ ಬಗ್ಗೆ ಕಾಳಜಿ ವಯುಸುತ್ತಾರೆ ಅವರು
ಹೇಳ್ತಾರೆ ರಾತ್ರಿ ವೇಳೆ ಬಿಸಿನೀರು ಕೊಡಿ ಮತ್ತು ಬೆಚ್ಚನೆ ಉಡುಪು ದರಿಸು ಮತ್ತು ಬೇಜಾರಾದರೆ ಸಿನಿಮ ನೋಡು ಅಂತ ಕೆಲ ವೆಬ್ ಸೈಟ್ ಅಡ್ರೆಸ್ ಸಹಾ ಕೊಡುತ್ತಾರೆ ಮಾತು ಕೆಲವಂದು ಪುಸ್ತಕವನ್ನು ತಂದು ಇಟ್ಟು ಅವುಗಳನ್ನು ಓದಲು ಹೇಳ್ತಾರೆ ಇರಿತಿ ತುಂಬಾ ಸಹಾಯ ಮಾಡ್ತಾರೆ ಅವರು ಇಲ್ಲದಿದ್ದರೆ ಯಾವತ್ತು ರಾತ್ರಿ ಕೆಲಸಕ್ಕೆ ಗುಡ್ ಬಾಯ್ ಹೇಳ್ತಿದ್ದೆ.
       ನನಗೆ ರಾತ್ರಿ ಕೆಲಸಕ್ಕೆ ಬರುವ ಅವಶಕತ್ತೆ ಇಲ್ಲ ಯಾಕೆಂದರೆ ನಾನು ಮಡುವಕೆಲಸದಲ್ಲಿ ಒಬ್ಬ ಕೆಲಸಗಾರನ ಕೊರತೆ ಇರುವುದರಿಂದ ಮಾಡಬೇಕಾಗಿದೆ. ಇಂತ ಸಮಯದಲ್ಲಿ ಮೇಲೆ ಹಿಳಿದ ಗೆಳಯ ಹಿಳಿದ ನಿನ್ನು ರಾತ್ರಿ ಕೆಲಸಕ್ಕೆ ಬಾ ಅಂತ ನಾನು ಅವರ ಮಾತಿಗೆ ಬೆಲೆಕೊಟ್ಟು ಹೋಗುತಿದ್ದೆನಿ ಹಾಗೆ ನನ್ನ ಇನೊಬ್ಬ ಗೆಳೆಯನು ರಾತ್ರಿ ಕೆಲಸ ನಿನ್ನೆ ಮಾಡು ಅಂತ ಹೇಳಲು ಆಗುತ್ತಿಲ್ಲ ಯಾಕೆಂದರೆ ಅದರ ಕಷ್ಟ ನನಗೆ ಅರ್ಥವಾಗಿದೆ ಅದರಿಂದ ನಾನು ಅವನ ಜೊತೆ ಹಂಚಿಕೊಂಡು ಮಾಡುತಿದ್ದೇನೆ.
     ಆದರೆ ನಮ್ಮ ಟಿಮ್ ನಾ ಕೆಲಸ ಗೆಳೆಯರು ಹೇಳ್ತಾರೆ ರಾತ್ರಿಕೆಲಸ ಚನ್ನಾಗಿ ಇದ್ದೀಯ ಅಂತ ಕೇಳ್ತಾರೆ ಅದಕ್ಕೆ ನಾನು ಹೇಳ್ತೀನಿ ಚನ್ನಾಗಿದೆ ಅಂತ ಯಾಕೆಂದರೆ ಇಲ್ಲ ಅಂದರೆ ಪ್ರಶ್ನೆಗಳಮೇಲೆ ಪ್ರಶ್ನೆ ಕೇಳ್ತಾರೆ ದಕ್ಕೆ ಒಂದು ಉತ್ತರ ಕೊಟ್ಟರೆ ಸುಮನೆಅಗುತ್ತಾರೆ. ಆದರು ತಿರ ಹತ್ತಿರದ ಗೆಳೆಯರಿಗೆ ಮಾತ್ರ ಹೇಳ್ತೀನಿ ಉಳಿದವರಿಗೆ ಮಾತ್ರ ಚನ್ನಾಗಿದೆ ಅಂತ ಉತ್ತರಕೊಟ್ಟು ಸುಮನಗುತ್ತೇನೆ. ಮಂತ್ತೆ ಕೆಲವರು ಕೇಳ್ತಾರೆ ಆರಾಮಾಗಿ ಇದ್ದೀಯ ಅಂತಾರೆ ಆಗ ಹೇಳ್ತೀನಿ ಅವರ ಅವರ ಕಷ್ಟ ಅವರಿಗೆ ಗುತ್ತು ನಿನಗೇ ನಾನು ಆರಾಮವಾಗಿ ಇರುವಂತೆ ಕಾಣುತ್ತೀನಿ ನನಗೆ ನೀನು
ಆರಾಮವಾಗಿ ಇರುವಂತೆ ಅನಿಸುತದೆ.
      ಆದರು ಇದು ಬೇರೆ ಯಾರು ಕೊಟ್ಟ  ಶಿಕ್ಷೆಯಲ್ಲ ನಾನು ಮಾಡಿಕೊಂಡ ತಪ್ಪು ಅದಕ್ಕಾಗಿ ಯಾರನ್ನು ದೂರುವಂತಿಲ್ಲ             ( ಮಾಡಿದ್ದೂ ಉಣ್ಣು ಮಾರಾಯ ) ಅನ್ನು ಗದೆಯಹಾಗೆ ಆದರು ಯಾವತ್ತು ಇದರಿಂದ ಮುಕ್ತಿ ಅಂತ ದೇವರನ್ನು ಬೇಡದ ದಿನವಿಲ್ಲ.

ದುಃಖ ಆತ್ಮಕ್ಕೆ ವಿಷವಾಗುತ್ತದೆ......

ನಿಮ್ಮ ಗೆಳೆಯ ಒಂದೇ ಒಂದು ನಗು ಇಲ್ಲದೆ ಇದ್ದಾನೆ ಎಂದಾದರೆ ನಿಮ್ಮದೊಂದು ನಗು ಅವನಿಗೆ ನೀಡಿ.
ದುಃಖವನ್ನು ಹೊರಗಿಡಬೇಕು ಎಂದು ನಾವು ಗೋಡೆ ಕತಿಕೊಂದರೆ ಸಂತೋಷವೇನು ಚಿಮ್ಮಿ ಹರಿಯುವುದಿಲ್ಲ.
ನೀವು ಪ್ರೀತಿಸುವ ಇಲ್ಲರು ನಿಮ್ಮನ್ನು ತಿರಸ್ಕರಿಸಿದಾಗ ಅಥವಾ ಮೃತಪಟ್ಟಾಗ ಅಳುವುದು ಸುಲಭ.
ಸಂಪೂರ್ಣ ಮೌನಾವು ದುಃಖಕ್ಕೆ ಎಡೆಮಾಡಿಕೊಡುತ್ತದೆ. ಇದು ಮೃತ್ಯುವಿನ ಛಾಯೆ.
ದೇವರ ಸೇವೆ ಮಾಡುವುದಕ್ಕೆ ಒಂದು ಮುಟೆ ದುಃಖಕ್ಕಿಂತ   ಒಂದು ಬೊಗಸೆ ಸಂತೋಷ ಸಾಕು.
ಉತ್ತಮ ಹಾಸ್ಯ ಆತ್ಮದ ಅರೋಗ್ಯ ವೃದ್ದಿಸುತ್ತದೆ, ದುಃಖ ವಿಷವಾಗುತ್ತದೆ.
ದುಃಖ ಮತ್ತು ಕಟ್ಟಲೆಗಳು ತುಂಬಾ ಸುಂದರವಗಿರುತ್ತವೆ ಮತ್ತು ನಮ್ಮನ್ನು ಧ್ಯನಸ್ಥಸ್ಥಿತಿಗೆ ಕೊಂಡೊಯ್ಯುತ್ತವೆ.
ನೀವು ದುಃಖದ ಬಗ್ಗೆ ತಿಲಿದುಕೊಡಿಲ್ಲ ಎಂದಾದರೆ ಸಂತೋಷವನ್ನು ವರ್ಣಿಸಲರಿರಿ.
ಅತಿಯಾದ ದುಃಖದಲ್ಲಿ ಭಾವನಾತ್ಮಕತೆಗೆ ಅವಕಾಶವೇ ಇರುವುದಿಲ್ಲ.