Pages

Saturday 21 May 2011

ಸುಪ್ರಭತಾ

ಎಲ್ಲ ಬೆರಳುಗಳೂ ಉದ್ದದಲ್ಲಿ ಬೇರೆ ಬೇರೆ.
ಆದರೆ ಅವನ್ನು ಬಗ್ಗಿಸಿದರೆ ಎಲ್ಲವೂ ಸಮ ಸಮ.
ತಗ್ಗಿ ಬಗ್ಗಿ ನಡೆದರೆ ಬದುಕು ಸುಸೂತ್ರ, ಸುರುಳಿತ.
ಆಗ ಎಂಥ ಸಂನಿವೆಶವನ್ನಾದರೂ ನಿಭಾಯಿಸಬಹುದು.

ಸಿಟ್ಟೆ೦ದರೆ ಕ್ಷಣಿಕ ಹುಚ್ಚುತನ.
ಇದು ಎಂಥ ಸಂಬಂಧ,
ಸಂನಿವೆಶವನ್ನಾದರೂ ಕೆದಿಸಬಲ್ಲುದು.
ಸಿಟ್ಟಿನ ಕೈಗೆ ಮಾತ್ರ ಬುದ್ದಿ ಕೊಡಬಾರದು.
ನಿಮ್ಮ ಸಿಟ್ಟು ನಿಮ್ಮ ಪರಮ ವೈರಿ

ಒಬ್ಬ ವ್ಯಕ್ತಿ ಮೃದುವಗಿದ್ದಾನೆ ಎಂದು ಮಾತ್ರಕ್ಕೆ
ಆತ ದುರ್ಬಲನಾಗಿದ್ದಾನೆ ಎಂದರ್ಥವಲ್ಲ.
ಅತ್ಯಂತ ಮೃದುವಾಗಿರುವ ನಿರಿನಿಂದಲೇ
ಕಲ್ಲನ್ನು ಕತ್ತರಿಸುತ್ತಾರೆ. ವಿದ್ಯುತ್ತನ್ನು ಉತ್ಪಾದಿಸುತ್ತಾರೆ.

ಜೀವನದಲ್ಲಿ ಎಲ್ಲರನ್ನೂ ಸ್ನೇಹಿತರಾಗಿಯೇ
ಮೊದಲು ಸ್ವಿಕರಿಸುತ್ತೇವೆ.
ಯಾರು ಶತ್ರುಗಳಾಗಿ ಪರಿಚಿತರಗುವುದಿಲ್ಲ.
ಪ್ರತಿ ಸಂಬಂಧವೂ ಸ್ನೇಹವನ್ನೇ ಅಪೇಕ್ಷಿಸುತ್ತದೆ.
ಅದನ್ನು ಮುಂದುವರಿಸಬೇಕು.

ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು
ಒಂದು ಪಾಠ ಎಂದು ಸ್ವಿಕರಿಸಿದರೆ ನಾವು ಅದನ್ನು
(ಸಮಸ್ಯೆಯನ್ನು) ನೋಡುವ ದೃಷ್ಟಿಕೋನವೇ ಬದಲಾಗುತ್ತದೆ.
ಪ್ರೀತಿ ಸಮಸ್ಯೆ ನಮಗೆ ಜೀವನ ಪಾಠವಾಗಲಿ.

ನಮ್ಮ ನಗುವನ್ನು ಯಾವತ್ತೂ ಕಳೆದುಕೊಳ್ಳಬಾರದು.
ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು
ನಗುವಿಗಿಂತ ಬೇರೆ ಯಾವುದೇ ಭಾವನೆಯೂ ಮುಚ್ಚಿಡಲಾರದು.

1 comment: